ಶಿರಸಿ :ವಕೀಲ ಅಜಿತ್ ನಾಯ್ಕರನ್ನು ಕತ್ತಿಯಿಂದ ಕೊಚ್ಚಿ ಬರ್ಭರವಾಗಿ 2018 ಜುಲೈ 27 ರಂದು ಕೊಲೆ ಮಾಡಿದ್ದು ಸಾಬೀತಾದ ಹಿನ್ನಲೆಯಲ್ಲಿ ಅಪರಾಧಿ ಪಾಂಡುರಂಗ ಕಾಂಬಳೆಗೆ ಜೀವಾವಧಿ ಶಿಕ್ಷೆ ವಿಧಿಸಿತು. ಹಾಗೂ 25 ಸಾವಿರ ರೂಪಾಯಿ ದಂಡ, 50 ಸಾವಿರ ರೂಪಾಯಿ ಮೃತನ ಕುಟುಂಬಕ್ಕೆ ಪರಿಹಾರ ಮತ್ತು ಹೆಚ್ಚಿನ ಪರಿಹಾರವನ್ನುಜಿಲ್ಲಾ ಕಾನೂನು ಸೇವಾ ಸಮಿತಿಯಿಂದ ಪಡೆಯಬಹುದು ಎಂದು ಶಿರಸಿ ಪೀಠಾಸೀನ ನ್ಯಾಯದೀಶರಾದ ಕಿರಣ ಕಿಣಿ ಮಹತ್ವದ ತೀರ್ಪು ನೀಡಿದ್ದಾರೆ.