ಯಲ್ಲಾಪುರ: ಯಲ್ಲಾಪುರ ತಾಲೂಕಿನ ಶಿರಲೆ ಫಾಲ್ಸ್ ಕ್ರಾಸ್ ಬಳಿ ಲಾರಿ ಪಲ್ಟಿ ಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ಚಾಲಕನನ್ನು ಬಿಹಾರ ರಾಜ್ಯದ ಬಂಕಾ ಜಿಲ್ಲೆಯ, ಬೃಂದಾವನ ನಿವಾಸಿ, ಮುಖೇಶಕುಮಾರ ನಾರಾಯಣ ದೇವ (27) ಎಂದು ಗುರುತಿಸಲಾಗಿದೆ. ಈತನು ಲಾರಿಯನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ. ಶಿರಲೆ ಫಾಲ್ಸ್ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.