ಹುಬ್ಬಳ್ಳಿ: ಕೆನಡಾದಲ್ಲಿ -ಡ್ ಪ್ಯಾಕಿಂಗ್ ಕೆಲಸವಿದೆ ಎಂದು ನಂಬಿಸಿದ ಅಪರಿಚಿತರು ಆನ್ಲೈನ್ ಮೂಲಕ ಇಲ್ಲಿಯ ಬೆಂಗೇರಿ ಮೆಹಬೂಬ್ ನರೇಗಲ್ ಎಂಬುವರಿಗೆ ೬.೬೪ ಲಕ್ಷ ರೂ. ವಂಚಿಸಿದ ಪ್ರಕರಣ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೆಹಬೂಬ್ ಅವರು ಜಾಬ್ ಕುರಿತು -ಸ್ಬುಕ್ನಲ್ಲಿ ಜಾಹೀರಾತು ವೀಕ್ಷಿಸಿದ್ದಾರೆ. ಬಳಿಕ ಲಿಂಕ್ ಓಪನ್ ಮಾಡಿದಾಗ ಅಪರಿಚಿತ ವಾಟ್ಸ ಆಪ್ ಮೂಲಕ ಸಂಪರ್ಕಿಸಿ ಕೆಲಸದ ಬಗ್ಗೆ ಮಾಹಿತಿ ನೀಡಿ ನಂಬಿಸಿ, ಕೆನಡಾ ಹೋಗಲು ಪಾಸ್ಪೋರ್ಟ್, ಬಯೋಮೆಟ್ರಿಕ್ ಸೇರಿದಂತೆ ವಿವಿಧ ಕೆಲಸಕ್ಕೆ ಹಣ ನೀಡಬೇಕು ಎಂದು ನಂಬಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.