ಶಿವಮೊಗ್ಗ: ಎಫ್.ಡಿ.ಎ ಲಕ್ಷ್ಮೀಪತಿ ಮನೆಯಲ್ಲಿ 2.49 ಕೋಟಿ ಮೌಲ್ಯದ ಆಸ್ತಿ ಪತ್ತೆ, ಶಿವಮೊಗ್ಗದಲ್ಲಿ ಲೋಕಾ ಅಧಿಕಾರಿಗಳ ಮಾಹಿತಿ
ಆದಾಯಕ್ಕಿಂತಲು ಹೆಚ್ಚಿಗೆ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆ, ಲೋಕಾಯುಕ್ತ ಪೊಲೀಸರು ಶಿವಮೊಗ್ಗ ಮೆಡಿಕಲ್ ಕಾಲೇಜು ಎಫ್.ಡಿ.ಎ ಲಕ್ಷ್ಮೀಪತಿ.ಸಿ.ಎನ್ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಐದು ಕಡೆ ದಾಳಿ ನಡೆಸಿ ಒಟ್ಟು 2.49 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ. ಲಕ್ಷ್ಮೀಪತಿ ಬಳಿ 3 ಮನೆಗಳು, 3 ಎಕರೆ 20 ಗುಂಟೆ ಕೃಷಿ ಜಮೀನು ಪತ್ತೆಯಾಗಿದೆ. ಇವುಗಳ ಮೌಲ್ಯ 1,63,80,000 ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ತಿಳಿಸಲಾಗಿದೆ. ಇನ್ನು ದಾಳಿ ಸಂದರ್ಭ 12,01,720 ನಗದು, 23,29,880 ಮೌಲ್ಯದ ಆಭರಣ, 23.04 ಲಕ್ಷ ಮೌಲ್ಯದ ವಾಹನಗಳು, 27,47,881 ಮೌಲ್ಯದ ಗೃಯೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಒಟ್ಟು 2,49,63,481 ಮೌಲ್ಯದ ಆಸ್ತಿ ಪತ್ತೆಯಾಗಿದೆ.