ತೀರ್ಥಹಳ್ಳಿ: ಬಗ್ಗೊಡಿಗೆ ಗ್ರಾಮದ ಯುವತಿ ನಾಪತ್ತೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಬಗ್ಗೊಡಿಗೆ ಗ್ರಾಮದ ಆನಂದ್ ಹೆಚ್ಎಸ್ ಎಂಬುವರ ಪುತ್ರಿ ಹತ್ತೊಂಬತ್ತು ವರ್ಷದ ಈಶಾನ್ಯ ಶಿವಮೊಗ್ಗದಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡಿಕೊಂಡಿದ್ದು ಮನೆಯಿಂದ ಕಾಲೇಜಿಗೆ ಹೋಗುವುದಾಗಿ ನವೆಂಬರ್ 10 ರಂದು ಹೋದವಳು ಇರುವವರಿಗೆ ವಾಪಸ್ ಬಂದಿರುವುದಿಲ್ಲ. ಈಕೆಯ ಬಗ್ಗೆ ಎಲ್ಲೆಡೆ ವಿಚಾರಿಸಿದರು ಸುಳಿವು ಸಿಕ್ಕಿರುವುದಿಲ್ಲ. ಕಾಣೆಯಾಗಿರುವ ಯುವತಿಯ ಚಹರೆ ಐದು ಅಡಿ ಎತ್ತರ, ದೃಢವಾದ ಮೈಕಟ್ಟು, ದುಂಡು ಮುಖ, ಎಣ್ಣೆಕಪ್ಪು ಬಣ್ಣ ಹೊಂದಿರುತ್ತಾಳೆ. ಈಕೆಯ ಬಗ್ಗೆ ಯಾರಿಗಾದರೂ ಪೊಲೀಸ್ ಠಾಣೆಯನ್ನ ಸಂಪರ್ಕಿಸುವಂತೆ ಪೊಲೀಸ್ ಅಧಿಕಾರಿಗಳು ಶನಿವಾರ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.