ಜೇವರ್ಗಿ: ಪಟ್ಟಣದಲ್ಲಿ ಪೌರಕಾರ್ಮಿಕರ ಮುಷ್ಕರ ಅಂತ್ಯ, ಶಾಸಕರಿಂದ ನ್ಯಾಯ ಒದಗಿಸುವ ಭರವಸೆ
ಜೇವರ್ಗಿ ಪುರಸಭೆ ಕಚೇರಿ ಮುಂದೆ 16 ಜನ ಪೌರ ಕಾರ್ಮಿಕರ ನಡೆಸುತ್ತಿದ್ದ ಮುಷ್ಕರ ಸ್ಥಳಕ್ಕೆ ಶಾಸಕ ಅಜಯ ಸಿಂಗ್ ಭೇಟಿ ನೀಡಿ ಪೌರಕಾರ್ಮಿಕರ ನ್ಯಾಯತವಾದ ಬೇಡಿಕೆಯನ್ನು ಈಡೇರಿಸುವದಾಗಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಪೌರಕಾರ್ಮಿಕರು ತಮ್ಮ ಮುಷ್ಕರ ಅಂತ್ಯ ಗೊಳಿಸಿದ್ದಾರೆ ಎಂದು ಗುರುವಾರ ಒಂಬತ್ತು ಗಂಟೆಗೆ ಮಾಹಿತಿ ಲಭ್ಯವಾಗಿದೆ. ಶಾಸಕರ ಭೇಟಿ ವೇಳೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಾಂತಪ್ಪ ಕೂಡ್ಲಿಗಿ, ಡಾ.ಮಹೇಶ್ ರಾಠೋಡ, ಮಲ್ಲಣ್ಣ ಕೊಡಚಿ, 16 ಜನ ಪೌರಕಾರ್ಮಿಕರು ಮತ್ತು ವಿವಿಧ ಸಂಘಟನೆ ಮುಖಂಡರು ಉಪಸ್ಥಿತರಿದ್ದರು.