ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ಶ್ರೀ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನಲೆಯಲ್ಲಿ ಬಂಡಿಗಣಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.ಭಕ್ತರ ದಂಡು ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಮಠಕ್ಕೆ ದೌಡಾಯಿಸುತ್ತಿದ್ದಾರೆ.ಜೊತೆಗೆ ರಬಕವಿ ಬನಹಟ್ಟಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮುಂಜಾಗೃತ ಕ್ರಮಗಳನ್ನ ಕೈಕೊಂಡಿದ್ದಾರೆ.ಇದೇ ಸಂದರ್ಭದಲ್ಲಿ ಮಾತನಾಡಿರುವ ಶ್ರೀಗಳ ಕಿರಿಯ ಸುಪುತ್ತ ಶಿವಾನಂದ ಅವರು, ಶ್ರೀಗಳು ಲಿಂಗೈಕ್ಯರಾದರೂ ಅವರ ಆದರ್ಶಗಳು ನಮ್ಮ ಜೊತೆಗಿವೆ ಅವರ ಆರಾಧನೆ ಮಾಡುತ್ತ ಸೇವೆ ಮಾಡೋಣ,ಎಲ್ಲರೂ ಶಾಂತಿಯಿಂದ ಅಪ್ಪಾಜಿ ಅವರ ಅಂತಿಮ ದರ್ಶನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.