ಹೆಗ್ಗಡದೇವನಕೋಟೆ: ಬಿದರಹಳ್ಳಿ ಗ್ರಾಮದಲ್ಲಿ ಮಾರಮ್ಮನ ಹಬ್ಬ ಸಂಪನ್ನ
ಎಚ್.ಡಿ. ಕೋಟೆ ತಾಲ್ಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಾರಮ್ಮನ ಹಬ್ಬ ನಡೆಯಿತು. ಗ್ರಾಮದ ಅಂಕದಿಂದ ಮಹಿಳೆಯರು ಕಳಸಗಳನ್ನು ಹೊತ್ತು ಮಾರಮ್ಮ ದೇವಿಯ ಉತ್ಸವಕ್ಕೆ ಚಾಲನೆ ನೀಡಿದರು. ಮೆರವವಣಿಗೆಗೆ ಸತ್ತಿಗೆ ಸೂರಪಾನಿ, ವೀರಗಾಸೆ ಮಂಗಳವಾದ್ಯಗಳು ಸಾಥ್ ನೀಡಿದವು. ಗ್ರಾಮದ ಮಹಿಳೆಯರು ತಂಬಿಟ್ಟನ್ನು ಮಾಡಿ, ಅದಕ್ಕೆ ಗಣಗಲೆ ಹೂವಿನಿಂದ ಶೃಂಗಾರ ಮಾಡಿ ಮಾರಮ್ಮ ದೇವಾಲಯಕ್ಕೆ ಬಂದು ತಂಪಿನ ಪೂಜೆ ಮಾಡಿದರು. ಬಳಿಕ ಪರಸ್ಪರ ತಂಬಿಟ್ಟನ್ನು ತಿನ್ನಿಸುವ ಮೂಲಕ ಶುಭಾಶಯ ಕೋರಿದರು. ಭಕ್ತರು ಕೆಂಡದ ಮಡಕೆಗಳನ್ನು ಹೊತ್ತು ಹರಕೆ ತೀರಿಸಿದರು.