ಯಲ್ಲಾಪುರ: ತುಂಬೆಬೀಡುನಲ್ಲಿ ಬೇಡ್ತಿ-ವರದಾ ನದಿ ಜೋಡಣೆ ವಿರುದ್ಧ ಬ್ರಹತ್ ಪ್ರತಿಭಟನಾ ಸಮಾವೇಶ,ಸ್ವರ್ಣ ವಲ್ಲಿ ಶ್ರೀ,ಸಂಸದ ಕಾಗೇರಿ ಉಪಸ್ಥಿಟಿತಿ
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಬೇಡ್ತಿ-ವರದಾ ನದಿ ಜೋಡಣೆ ವಿರುದ್ಧ ಬ್ರಹತ್ ಪ್ರತಿಭಟನಾ ಬೈಕ್ ರ಼್ಯಾಲಿ ಹಾಗೂ ಸಮಾವೇಶ ಯಲ್ಲಾಪುರ ತಾಲೂಕಿನ ತುಂಬೆಬೀಡಿನಲ್ಲಿ ನಡೆಯಿತು. ವೃಕ್ಷಾರೋಪಣ ನೆರವೇರಿಸಿ ಸಮಾವೇಶ ಉದ್ಘಾಟಿಸಿದ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು,ಯೋಜನೆಯ ಡಿಪಿಆರ್ ಆಗಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಆದರೆ ಇನ್ನೂ ಡಿಪಿಆರ್ ಆಗಿಲ್ಲ. ಎತ್ತಿನಹೊಳೆ ಯೋಜನೆಯ ವೈಫಲ್ಯದ ನಿದರ್ಶನ ಕಣ್ಣೆದುರೇ ಇದೆ. ಈ ಯೋಜನೆ ಜಾರಿಗೆ ಬಂದರೂ ಅದೇ ಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಈ ಹಂತದಲ್ಲೇ ಗಟ್ಟಿ ಧ್ವನಿಯ ಮೂಲಕ ಯೋಜನೆಯನ್ನು ವಿರೋಧಿಸಬೇಕು ಎಂದು ಕರೆ ನೀಡಿದರು.