ಬೇಲೂರು: ಪಟ್ಟಣದಲ್ಲಿ ಪೌರಕಾರ್ಮಿಕರ ದಿನಾಚರಣೆ: ಮೆರವಣಿಗೆಯಲ್ಲಿ ಪೌರಕಾರ್ಮಿಕರು ಡ್ಯಾನ್ಸ್
Belur, Hassan | Oct 8, 2025 ಬೇಲೂರು ಪಟ್ಟಣದ ಜೆಪಿ ನಗರದಲ್ಲಿನ ಅರ್ವಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆ ಸಮಾರಂಭವನ್ನು ಪುರಸಭೆ ಮಾಜಿ ಅಧ್ಯಕ್ಷ ತೀರ್ಥ ಕುಮಾರಿ ಉದ್ಘಾಟನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಪೌರಕಾರ್ಮಿಕರು ಮಳೆ,ಚಳಿ ಎನ್ನದೆ ದಿನನಿತ್ಯ ಪಟ್ಟಣದ ಸ್ವಚ್ಚತಾ ಕಾರ್ಯ ನಡೆಸುವ ಪೌರಕಾರ್ಮಿಕರು ಇಂದಿನವರೆಗೂ ನಿವೇಶನ ಮತ್ತು ಮನೆ ಇಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಶಾಸಕರು ಶೀಘ್ರದಲ್ಲೇ ನಿವೇಶನ ವಿತರಿಸಬೇಕು ಮತ್ತು ಸಾಮಾನ್ಯವಾಗಿ ಪೌರಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿ ಇಲ್ಲದ ಕಾರಣದಿಂದ ಹೆಚ್ಚು ಹೆಚ್ಚು ಅನಾರೋಗ್ಯ ಪೀಡಿತರಾಗಿದ್ದಾರೆ ಎಂದರು.