ಆಳಂದ: ತಡಕಲ್ ನಲ್ಲಿ ಒಂದೇ ಬಾವಿಯಲ್ಲಿ ತಾಯಿ ಮಗಳ ಶವ ಪತ್ತೆ: ಮದುವೆ ವಿಚಾರಕ್ಕೆ ಆತ್ಮಹತ್ಯೆ ಶಂಕೆ
ಆಳಂದ ತಾಲೂಕಿನ ತಡಕಲ್ ಗ್ರಾಮದ ಜಮೀನಿನ ಭಾವಿಗೊಂದರಲ್ಲಿ ತಾಯಿ ಮಗಳು ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ... ನರ್ಸ್ ಹುದ್ದೆಯಲ್ಲಿದ್ದ 22 ವರ್ಷ ವಯಸ್ಸಿನ ಮಗಳು ಮಧುಮತಿ ಹಂಗರಗಿ ಹಾಗೂ ಆಕೆಯ ತಾಯಿ ಜಗದೇವಿ ಹಂಗರಗಿ ಮೃತಪಟ್ಟವರಾಗಿದ್ದಾರೆ. ಮಧುಮತಿ ಮದುವೆ ವಯಸ್ಸಿಗೆ ಬಂದ ಹಿನ್ನೆಲೆ ಮದುವೆ ವಿಚಾರ ಪ್ರಸ್ತಾಪಿಸಿ ಕಳೆದ ಕೆಲವು ದಿನಗಳಿಂದ ವರನ ಹುಡುಕಾಟ ನಡೆದಿತ್ತು. ಆದರೆ ಮಧುಮತಿಗೆ ಮದುವೆ ಮಾಡಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಮನೆಯಲ್ಲಿ ಒಂದಿಷ್ಟು ಮನಸ್ತಾಪ ಕೂಡ ನಡೆದಿತ್ತು ಎನ್ನಲಾಗಿದೆ. ಸೋಮವಾರ ರಾತ್ರಿ ಬಹಿರ್ದಸೆಗೆ ಹೋಗಿಬರುವುದಾಗಿ ಹೇಳಿ ಹೋದ ಮದುಮತಿ ಹಾಗೂ ಸುಮಾರು ಹೊತ್ತಾದರೂ ವಾಪಸ್ ಬಾರದ ಕಾರಣ ಹುಡುಕಲು ಹೋಗಿದ್ದ ತಾಯಿ ಜಗದೇವಿ ಇಬ್ಬರೂ ಕೂಡ ಜ