ಯಲ್ಲಾಪುರ: ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯವರು ಪ್ರವಾಸೋದ್ಯಮ ಸಚಿವ ಎಚ್.ಕೇ.ಪಾಟೀಲ ಅವರ ಮಾರ್ಗದರ್ಶನದಲ್ಲಿ ರಚಿಸಿದ ವರದಿಯನ್ನು ಸರಕಾರ ಮಂಗಳೂರಿನಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮದ ಅದ್ದೂರಿ ಸಮಾವೇಶದಲ್ಲಿ ಸಮಿತಿಯ ಅಧ್ಯಕ್ಷ ಬೀರಣ್ಣ ನಾಯಕ ಮೊಗಟಾ ಮುಖ್ಯ ಮಂತ್ರಿಗಳಾದಸಿದ್ದರಾಮಯ್ಯನವರಿಗೆ ನೀಡುವ ಮೂಲಕ ಸರಕಾರ ವರದಿಯನ್ನು ಸ್ವೀಕರಿಸಿತು. ಸಮಿತಿಯ ಸದಸ್ಯರುಗಳಾದ ಎಸ್.ಜಿ. ಹೆಗಡೆ ಬೆದೆಹಕ್ಲ, ವೇಣುಗೋಪಾಲ ಮದ್ಗುಣಿ ಮತ್ತು ಡಾ.ಮಹೇಶ ಗೋಳಿಕಟ್ಟೆ ಉಪಸ್ಥಿತರಿದ್ದರು.