ಕಲಬುರಗಿ: ರೈತರಿಗೆ ಪರಿಹಾರ ವಿಚಾರ: ಬಿಜೆಪಿ ನಾಯಕರ ವಿರುದ್ಧ ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಸಚಿವರು ಎಸಿ ರೂಮ್ ದಿಂದ ಹೋರಗೆ ಬರಲಿ, ಮೊದಲು ಪರಿಹಾರ ಕೊಟ್ಟು ನಂತರ ಸಮೀಕ್ಷೆ ನಡೆಸಲಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ ಖರ್ಗೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಒಂದು ಗಂಟೆಗೆ ಕಲ್ಬುರ್ಗಿಯಲ್ಲಿ ಮಾತನಾಡಿದ ಅವರು, ತಲೆ ಇಲ್ಲದವರಂತೆ ಮಾತಾಡಬಾರದು. ರೈತರ ಬಗ್ಗೆ ಬಿಜೆಪಿ ನಮಗೆ ಪಾಠ ಹೇಳಲು ಹೋಗಬೇಡಿ. ನಿಮ್ಮ ಪೂಜ್ಯ ಅಪ್ಪಾಜಿ ಅವರು ಸಿಎಂ ಇದ್ದಾಗ ಎಷ್ಟು ಪರಿಹಾರ ಕೊಟ್ಟರು? ವೈಮಾನಿಕ ಸಮೀಕ್ಷೆ ನಡೆಸಿ, ಅಧಿಕಾರಿಗಳ ಜೊತೆ ಚರ್ಚೆ, ಸಭೆ ನಡೆಸಿದ ದಾಖಲೆ ಇದೆಯೇ? ಎಂದು ಪ್ರಶ್ನಿಸಿದರು. ಅಲ್ಲದೆ ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಪರಿಹಾರ ಕೊಡಿಸಿ ಎಂದು ವಾಗ್ದಾಳಿ ನಡೆಸಿದರು....