ಯಲ್ಲಾಪುರ :ಧಾರವಾಡದ ಮಕ್ಕಳ ಅಕಾಡೆಮಿಯ ರಜತ ಮಹೋತ್ಸವದ ಅಂಗವಾಗಿ ಆಲೂರು ವೆಂಕಟ್ ರಾವ್ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿಯಲ್ಲಾಪುರ ತಾಲೂಕಿನ ಕೊಡ್ಲಗದ್ದೆ ಗ್ರಾಮದ ಸಂಗೀತ ಶಿಕ್ಷಕ ವಿದ್ವಾನ್ ದತ್ತಾತ್ರೇಯ ಗಾಂವ್ಕರ ಚಿಟ್ಟೆಪಾಲ್ ರವರಿಗೆ ಬಾಲದೀಪ್ತಿ ಪುರಸ್ಕಾರವನ್ನು ಅಕಾಡೆಮಿ ಅಧ್ಯಕ್ಷ ಡಾ.ರಾಜನ್ ದೇಶಪಾಂಡೆ ಪ್ರದಾನ ಮಾಡಿದರು. ಕಳೆದ ಮೂರು ದಶಕಗಳಿಂದ ವಜ್ರಳ್ಳಿಯಲ್ಲಿ ಸರಸ್ವತಿ ಸಂಗೀತ ವಿದ್ಯಾಲಯ ಸ್ಥಾಪಿಸಿ ,ಅಪಾರ ಶಿಷ್ಯ ಸಮೂಹ ಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಅವರಲ್ಲಿ ಸಂಗೀತ ಶಿಕ್ಷಣ ಪಡೆದ ಅನೇಕ ಶಿಷ್ಯರು ಗಮನಾರ್ಹ ಸಾಧನೆ ಮಾಡಿದ್ದಾರೆ.