ಹುಬ್ಬಳ್ಳಿ ನಗರ: ನಗರದಲ್ಲಿ ಪಿಎಸ್ಐ ಆಕಾಂಕ್ಷಿ ಹೃದಯಾಘಾತದಿಂದ ಸಾವು
ಧಾರವಾಡ: ಪಿಎಸ್ಐ ಆಗಬೇಕು ಎಂಬ ಕನಸು ಹೊತ್ತಿದ್ದ ಅಭ್ಯರ್ಥಿಯೋರ್ವ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.ರಾಮಾಂಜನೇಯ ಎಂಬ ಪಿಎಸ್ಐ ಆಕಾಂಕ್ಷಿಯೇ ಹೃದಯಾಘಾತದಿಂದ ಸಾವಿಗೀಡಾದವರು. ಬಳ್ಳಾರಿ ಮೂಲದವರಾಗಿದ್ದ ರಾಮಾಂಜನೇಯ ಕಳೆದ ಐದು ವರ್ಷಗಳಿಂದ ಧಾರವಾಡದಲ್ಲಿ ಇದ್ದುಕೊಂಡೇ ಅಭ್ಯಾಸ ಮಾಡುತ್ತಿದ್ದರು.ಧಾರವಾಡ ನಿಸರ್ಗ ಲೇಔಟ್ನಲ್ಲಿ ರೂಮ್ ಮಾಡಿಕೊಂಡಿದ್ದ ಇವರಿಗೆ ನಿನ್ನೆ ರಾತ್ರಿ ಏಕಾಏಕಿ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ಗೆ ಅವರ ಸ್ನೇಹಿತರು ರವಾನಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ರಾಮಾಂಜನೇಯ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.