ಕಲಬುರಗಿ: ದೇವನತೆಗನೂರು ಗ್ರಾಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಂದ ಬೆಳೆಹಾನಿ ವಿಕ್ಷಣೆ
ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗ್ರಾಮೀಣ ಮತಕ್ಷೇತ್ರದ ದೇವನತೆಗನೂರು ಗ್ರಾಮಕ್ಕೆ ಭೇಟಿ ನೀಡಿ ವಿಪರೀತ ಮಳೆಯಿಂದ ಸೃಷ್ಟಿಯಾದ ಅತಿವೃಷ್ಟಿ ಬೆಳೆ ಹಾನಿ ವಿಕ್ಷಣೆ ಮಾಡಿದರು. ರೈತರಿಂದ ಕೇಲ ಮಾಹಿತಿ ಕಲೆ ಹಾಕಿ ಸೂಕ್ತ ಪರಿಹಾರ ದೊರಕಿಸಿ ಕೊಡುವ ಭರವಸೆ ರೈತರಿಗೆ ನೀಡಿದರು. ಬುಧವಾರ 4 ಗಂಟೆಗೆ ಸುಮಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ಬಸವರಾಜ್ ಮತ್ತಿಮಡು, ನಿತಿನ್ ಗುತ್ತೇದಾರ್, ಅಮರನಾಥ್ ಪಾಟೀಲ್, ಸಂಬಂಧಪಟ್ಟ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.