*ಪ್ರಸಿದ್ಧ ಕೋಟೆಗುಡ್ಡ ಮಾರಮ್ಮದೇವಿ ಜಾತ್ರೆಗೆ ಚಾಲನೆ* ಮೊಳಕಾಲ್ಮೂರು: ತಾಲೂಕಿನ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ರಾಯಾಪುರ ಮ್ಯಾಸರಹಟ್ಟಿ ಗ್ರಾಮ ಜಾತ್ರೆ ಇಂದಿನಿಂದ ಆರಂಭಗೊಂಡಿದೆ.ಶ್ರೀ ಕೋಟೆಗುಡ್ಡ ಮಾರಮ್ಮ ಜಾತ್ರೆಯ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಬೊಮ್ಮಲಿಂಗನಹಳ್ಳಿ ಹಗರಿಯಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು. ಗಂಗಾ ಪೂಜೆ ಶುದ್ಧತೆ ಮತ್ತು ಜೀವಶಕ್ತಿಯ ಸಂಕೇತವಾಗಿದೆ. ಜಾತ್ರೆಯ ಆರಂಭಕ್ಕೂ ಮೊದಲು ಗಂಗಾ ಪೂಜೆ ನೆರವೇರಿಸುವುದು ಸಂಪ್ರದಾಯ.