ಚಿತ್ರದುರ್ಗದ ವಿವಿ ಸಾಗರ ಡ್ಯಾಂ ನಾಲ್ಕನೇ ಬಾರಿಗೆ ಭರ್ತಿಯಾಗಿದ್ದು, ಸಚಿವ ಡಿ.ಸುಧಾಕರ್ ನೇತೃತ್ವದಲ್ಲಿ ಬಾಗಿನ ಅರ್ಪಣೆ ಮಾಡಿದ್ದೇವೆ. ಜಿಲ್ಲೆಯ ಶಾಸಕರ ಜೊತೆ ಮಂತ್ರಿಗಳ ಜೊತೆ ಸಭೆ ಮಾಡುತ್ತೇವೆ ಎಂದು ಮುಖ್ಯ ಇಂಜಿನಿಯರಿಂಗ್ ಎಪ್.ಎಚ್. ಲಮಾಣಿ ತಿಳಿಸಿದರು. ಭದ್ರಾ ಶಾಖಾ ಕಾಲುವೆ ಪರಿವೀಕ್ಷಣೆ ಇಟ್ಕೊಂಡಿದ್ದೇವೆ ಎಂದರು. ಶೇ.90% ಕೆಲಸ ಮುಗಿಸಿದ್ದು, ನೀರು ಎತ್ತಲು ಚಾಲನೆ ನೀಡುತ್ತೇವೆ ಎಂದರು. ಅಜ್ಜಂಪುರ ಬಳಿಯ ಕಾಲುವೆ ಕಾಮಗಾರಿ ಮುಗಿಸಿದ್ದೇವೆ. ಅಜ್ಜಂಪುರ ವೈ ಜಂಕ್ಷನ್ ನಿಂದ ಚಿತ್ರದುರ್ಗ ಶಾಖಾ ಕಾಲುವೆ 134 ಕಿಲೋಮೀಟರ್ ಇದೆ. ಎಲ್ಲಾ ಅಡೆತಡೆ ನಿವಾರಣೆ ಮಾಡಿದ್ದೇವೆ , ಅಲ್ಪಸ್ವಲ್ಪ ಕಾಲುವೆ ಮುಗಿಸಿ, ಫೆಬ್ರವರಿ ಅಂತ್ಯಕ್ಕೆ ಗೋನೂರು ಬಳಿಗೆ ನೀರು ಹರಿಸುತ್ತೇವೆ ಎಂದರು.