ಹಿಂದೂ ಮಹಿಳೆ ಹತ್ಯೆಗೆ ಕುಮ್ಮಕ್ಕು ನೀಡಿದ ಮತಾಂಧರನ್ನು ಬಂಧಿಸುವಂತೆ ವಿ ಎಚ್ ಪಿ ಯಿಂದ ಆಗ್ರಹ ಯಲ್ಲಾಪುರ : ಕಾಳಮ್ಮ ನಗರದಲ್ಲಿ ಹತ್ಯೆಯಾದ ರಂಜಿತಾ ಮನೆಗೆ ಭೇಟಿ ನೀಡಿ ನಂತರ ಸುದ್ದಿ ಗೋಷ್ಠಿಯಲ್ಲಿ ವಿ ಹಿ ಪ ರಾಜ್ಯ ಉಪಾಧ್ಯಕ್ಷ ಗಂಗಾಧರ ಜಿ ಮಾತನಾಡಿ ಹಿಂದೂ ಮಹಿಳೆ ರಂಜಿತಾಳ ಹತ್ಯೆಯನ್ನು ವಿಶ್ವ ಹಿಂದೂ ಪರಿಷತ್ ಬಲವಾಗಿ ಖಂಡಿಸುತ್ತದೆ ಇದನ್ನು ಗಂಭೀರ ವಾಗಿ ಪರಿಗಣಿಸಿ ಉಗ್ರ ಹೋರಾಟ ಮಾಡುತ್ತೇವೆ ರಾಮಾಪುರ ಶಾಲೆಯಲ್ಲಿ ಬಿಸಿಯೂಟ ತಯಾರಿಸಿ ದುಡಿದು ತಿನ್ನುವ ಹಿಂದೂ ಮಹಿಳೆ ರಂಜಿತಾಳನ್ನು ಮುಸ್ಲಿಂ ಯುವಕ ಬರ್ಭರ ಹತ್ಯೆ ಮಾಡಿ ಹಿಂದೂ ಗಳ ಪ್ರತಿಭಟನೆ ಎದುರಿಸಲಾರದೇ ಆರೋಪಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ಆತನಿಗೆ ಕುಮ್ಮಕ್ಕು ನೀಡಿದ ಮತಾಂಧರನ್ನು ಬಂಧಿಸುವಂತೆ ಒತ್ತಾಯಿಸಿದರು.