ಹುಬ್ಬಳ್ಳಿ: ಅಕೌಂಟ್ ಮೂಲಕ 50 ಸಾವಿರ ರೂಪಾಯಿ ಹಣವನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರ ಹಣವನ್ನು ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸರು ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾವಣಗೆರೆ ನಿವಾಸಿ ವಿಜಯಕುಮಾರ ಎಂಬಾತನ ಅಕೌಂಟ್ದಿಂದ 50 ಸಾವಿರ ರೂ. ಹಣ ಮಿಸ್ ಆಗಿ ಇನ್ನೊಬ್ಬರ ಅಕೌಂಟ್ಗೆ ಹೋಗಿತ್ತು. ಅದು ಹುಬ್ಬಳ್ಳಿಯ ನಿವಾಸಿಗೆ, ಹಣ ಕಳೆದುಕೊಂಡ ವಿಜಯಕುಮಾರ ಅವರನ್ನು ಪತ್ತೆ ಹಚ್ಚಿ ಹುಬ್ಬಳ್ಳಿಗೆ ಬಂದಿದ್ದಾನೆ. ಆಗ ಕಸಬಾಪೇಟ್ ಪೊಲೀಸ್ ಠಾಣೆಗೆ ಹೋಗಿ ವಿಷಯ ಹೇಳಿದಾಗ, ಪೊಲೀಸರು ಆತನನ್ನು ಕರೆಯಿಸಿ ಹಣ ಮರಳಿ ಕೊಡಿಸಿದ್ದಾರೆ.