ಹಾವೇರಿ: ಹಿಂಗಾರು ಬಿತ್ತನೆಯ ಬೀಜಗಳ ಖರೀದಿಗೆ ಮುಂದಾದ ಹಾವೇರಿ ಜಿಲ್ಲೆಯ ರೈತರು
Haveri, Haveri | Sep 29, 2025 ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಮುಗಿದಿದೆ. ಇದರ ಬೆನ್ನಲ್ಲಿಯೇ ರೈತರು ಹಿಂಗಾರು ಬಿತ್ತನೆಗೆ ಬೇಕಾದ ಜೋಳ ಕಡಲೆ ಬಿತ್ತನೆಬೀಜಗಳ ಖರೀದಿಗೆ ಮುಂದಾಗಿದ್ದಾರೆ. ಜೋಳ ಬಿತ್ತನೆಬೀಜ ಖರೀದಿಗೆ ಕೃಷಿ ಸಂಪರ್ಕ ಕೇಂದ್ರಕ್ಕೆ ಹೋದರೆ ಸರ್ವರ್ ಸಮಸ್ಯೆ ಎದುರಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು. ಮಂಗಳವಾರವಾದರು ಸಮರ್ಪಕ ಬಿತ್ತನೆಬೀಜ ವಿತರಿಸುವಂತೆ ಮನವಿ ಮಾಡಿದರು