ಕಲಬುರಗಿ: ಕೃಷಿ ಸಚಿವರಿಂದ ಕಲಬುರಗಿ ತಾಲೂಕಿನ ಪ್ರವಾಹ ಪೀಡಿತ ಸಾವಳಗಿ ಕ್ರಾಸ್, ಸರಡಗಿ ಬಿ. ಭೇಟಿ
ಅತಿವೃಷ್ಟಿಯಿಂದ ತೊಗರಿ ಸೇರಿ ವಿವಿಧ ಬೆಳೆಗಳು ಹಾಳಾಗಿದ್ದು, ಸೆ.30 ರಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಇಂದು ಕಲಬುರಗಿ ತಾಲೂಕಿನ ಪ್ರವಾಹ ಪೀಡಿತ ಸಾವಳಗಿ ಕ್ರಾಸ್, ಸರಡಗಿ ಬಿ. ಪ್ರದೇಶಗಳಿಗೆ ಭೇಟಿ ಪರಿಶೀಲನೆ ಮಾಡಿದರು. ರೈತರಿಂದ ಕೂಡ ಮಾಹಿತಿ ಪಡೆದ ಅವರು ಪರಿಹಾರ ಕೋಡಿಸುವ ಭರವಸೆ ನೀಡಿದರು. ಶಾಸಕ ಅಲ್ಲಮಪ್ರಭು ಪಾಟೀಲ್, ಶಾಸಕ ಬಿಆರ್ ಪಾಟೀಲ್ ಸೇರಿ ಅನೇಕರು ಉಪಸ್ಥಿತರಿದ್ದರು