ಹುಬ್ಬಳ್ಳಿ: ಕರೆಂಟ್ ಶಾಕ್ ಹೊಡೆದು ಯುವತಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಅಂಚಟಗೇರಿ ಓಣಿಯಲ್ಲಿ ನಡೆದಿದ್ದು, ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೇಘನಾ ಎಂಬ ಯುವತಿಗೆ ಕರೆಂಟ್ ಶಾಕ್ ಹೊಡೆದಿದೆ. ಅಕ್ಟೋಬರ್ ೨೨ ರಂದು ಮೇಘನಾ ನೀರಿನ ಮೋಟಾರ್ ಆಫ್ ಮಾಡಲು ಹೋದಾಗ ಕರೆಂಟ ಶಾಕ್ ಹೊಡೆದಿತ್ತು. ಶಾಕ್ ನಿಂದ ಕೋಮಾಗೆ ಹೋಗಿದ್ದ ಮೇಘನಾ ಕಳೆದ ೩೫ ದಿನಗಳಿಂದ ಕೆಎಂಸಿಆರ್ ಐ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮೇಘನಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕರೆಂಟ್ ಶಾಕ್ ಹೊಡೆದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.