ಯಲ್ಲಾಪುರ: ಬೀಗರಿನಲ್ಲಿ ಮನರಂಜಿಸಿದ ತಾಳಮದ್ದಳೆ ಕಾರ್ಯಕ್ರಮ
ಯಲ್ಲಾಪುರ: ಯಕ್ಷಗಾನ ಹಾಗೂ ತಾಳಮದ್ದಳೆ ಕಲೆಗಳು ಮಲೆನಾಡು ಹಾಗೂ ಕರಾವಳಿ ಭಾಗದ ಜನ-ಜೀವನದ ಅವಿಭಾಜ್ಯ ಅಂಗ. ಈ ಕಲೆಗಳು ಆಧುನಿಕ ಮನರಂಜನಾ ಪ್ರಕಾರಗಳು ಹಾಗೂ ಮಾಧ್ಯಮಗಳ ಕಾರಣದಿಂದಾಗಿ ಹಿನ್ನಡೆಯನ್ನು ಕಾಣುತ್ತಿರುವುದು ದೌರ್ಭಗ್ಯ ಎಂದು ಹಿರಿಯ ಕಲಾವಿದ ಗ. ನಾ. ಕೋಮಾರ ಹೇಳಿದರು. ತಾಲೂಕಿನ ಬೀಗಾರಿನ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಶ್ರೀಮಾತಾ ಕಲಾ ಕೂಟದ ವತಿಯಿಂದ ಆಯೋಜಿಸಿದ್ದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದರು.