ಹುಬ್ಬಳ್ಳಿ ನಗರ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತಿ ಹಿನ್ನೆಲೆ ನಗರದಲ್ಲಿ ಏಕತಾ ನಡುಗೆ
ಭಾರತೀಯ ಜನತಾ ಪಕ್ಷ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ವತಿಯಿಂದ ಭಾರತ ರತ್ನ, ಭಾರತೀಯ ಏಕತೆಯ ಶಿಲ್ಪಿ, ಪ್ರಾಮಾಣಿಕತೆ ಮತ್ತು ಧೈರ್ಯದ ಪ್ರತಿರೂಪ "ಸರ್ದಾರ್ ವಲ್ಲಭಭಾಯಿ ಪಟೇಲ್" ರವರ 150 ನೇ ಜಯಂತಿ ಅಂಗವಾಗಿ ನಗರದ ಮೂರುಸಾವಿರಮಠದ ಆವರಣದಿಂದ ಏಕತಾ ನಡುಗೆ ಜರುಗಿತು. ಈ ಸಂದರ್ಭದಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ, ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್, ಮಹಾನಗರ ಜಿಲ್ಲಾ ಅಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಸೀಮಾ. ಲದ್ವಾ, ಮಂಡಲ ಅಧ್ಯಕ್ಷರುಗಳು,ಮಹಿಳಾ ಮೋರ್ಚಾ ಪದಾಧಿಕಾರಿಗಳು,ಯುವಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು