ಚನ್ನಗಿರಿ: ನಿಯಂತ್ರಣ ತಪ್ಪಿ ಮುಗಳಿಹಳ್ಳಿ ಕೆರೆಗೆ ಉರುಳಿದ ಬೈಕ್, ಸವಾರ ಪಾರು
ಚನ್ನಗಿರಿಯಿಂದ ಉಬ್ರಾಣಿಗೆ ಬೈಕಿನಲ್ಲಿ ಹೋಗುತ್ತಿದ್ದ ಯುವಕ ಮುಗಳಿಹಳ್ಳಿ ಕೆರೆ ಏರಿಯ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದಿದ್ದು, ಕೆರೆಯಲ್ಲಿ ನೀರು ತಳಮಟ್ಟದಲ್ಲಿದ್ದ ಕಾರಣ ಬೈಕ್ ಸವಾರ ಪ್ರಾಣಾಪಾಯಾದಿಂದ ಪಾರಾಗಿರುವ ಘಟನೆ ರವಿವಾರ ನಡೆದಿದೆ. ಈ ಕೆರೆ ಏರಿಗೆ ತಡೆಗೋಡೆ ಇಲ್ಲದ ಕಾರಣ ಅನೇಕ ಅಪಘಾತಗಳು ಜರುಗುತ್ತವೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ತಡೆಗೋಡೆ ನಿರ್ಮಿಸಬೇಕು ಎಂದು ನೆಲ್ಲಿಹಂಕಲು ಗ್ರಾಮದ ಮುಖಂಡ ದೇವರಾಜ್ ಒತ್ತಾಯಿಸಿದ್ದಾರೆ.