ಹುಮ್ನಾಬಾದ್: ಮಾಣಿಕನಗರದಲ್ಲಿ ದತ್ತ ಜಯಂತಿ ಅಂಗವಾಗಿ ಮಾಣಿಕಪ್ರಭು ಆರಾಧನಾ ಸೇವೆ
ತಾಲೂಕಿನ ಇತಿಹಾಸ ಪ್ರಸಿದ್ಧ ಮಾಣಿಕ ನಗರದಲ್ಲಿ ಮಾಣಿಕಪ್ರಭು ದೇವಸ್ಥಾನದಲ್ಲಿ ದತ್ತ ಜಯಂತಿ ಅಂಗವಾಗಿ ಸೋಮವಾರ ರಾತ್ರಿ 7:30ಕ್ಕೆ ಶ್ರದ್ಧಾಭಕ್ತಿಯ ಆರಾಧನಾ ಸೇವೆ ನಡೆಯಿತು. ಮಾಣಿಕ್ ಪ್ರಭುಗಳ ಸಂಜೀವಿನಿ ಸಮಾಧಿ ಬಳಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ. ಜ್ಞಾನರಾಜ್ ಮಹಾರಾಜ್ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನಂದರಾಜ ಪ್ರಭು ಅವರು ಗಾಯನ ಪ್ರಸ್ತುತಪಡಿಸಿ ಗಾಯನ ಸೇವೆಗೆ ಚಾಲನೆ ನೀಡಿದರು.