ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ 22 ವರ್ಷದ ಯುವತಿ ಹಾರ್ಟ್ ಅಟ್ಯಾಕ್ ನಿಂದಾಗಿ ಸಾವನ್ನಪ್ಪಿರುವಾಗ ಘಟನೆ ಶೃಂಗೇರಿಯಲ್ಲಿ ಮಂಗಳವಾರ ನಡೆದಿದ್ದು,ಈ ಕುರಿತಾದ ಮಾಹಿತಿ ಬುಧವಾರ ಲಭ್ಯವಾಗಿದೆ. ತೀರ್ಥಹಳ್ಳಿ ಮೂಲದ 22 ವರ್ಷದ ದಿಶಾ ಶೃಂಗೇರಿ ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿದ್ದು,ಹಾಸ್ಟೆಲ್ ನಲ್ಲಿ ತೀವ್ರ ಎದೆ ನೋವಿನಿಂದ ದಿಶಾ ಕುಸಿದು ಬಿದಿದ್ದಾರೆ. ಬಳಿಕ ವೈದ್ಯರು ನಿಶಾ ಹೃದಯಘಾತದಿಂದ ಸಾವನ್ನಪ್ಪಿರುವುದನ್ನ ಖಚಿತಪಡಿಸಿದ್ದಾರೆ.