ಕಲಘಟಗಿ: ಆಕಸ್ಮಿಕ ಬೆಂಕಿ ಅವಘಡಕ್ಕೆ ಆಕಳುಗಳು ಸಾವು
ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದಲ್ಲಿ ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ, ಶಿವಪ್ಪ ಬಸಪ್ಪ ಯರಿಬೈಲ್ ಎಂಬುವವರಿಗೆ ಸೇರಿದ ನಾಲ್ಕು ಗೋವುಗಳು ಸುಟ್ಟು ಕರಕಲಾಗಿವೆ. ತಡರಾತ್ರಿ ನಡೆದ ಈ ದುರ್ಘಟನೆಯಲ್ಲಿ ಜಾನುವಾರುಗಳು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.