ಅಮ್ಮನ ಜೊತೆ ಆಟ ಆಡ್ತಿದ್ದ 5 ವರ್ಷದ ಮಗುವಿಗೆ ಒದ್ದಿದ್ದ ವ್ಯಕ್ತಿಯನ್ನು ಬನಶಂಕರಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 35 ವರ್ಷದ ರಂಜನ್ ಬಂಧಿತ ವ್ಯಕ್ತಿ. ಬೆಂಗಳೂರಿನ ತ್ಯಾಗರಾಜನಗರದ ಮನೆ ಮುಂದಿನ ರಸ್ತೆಯಲ್ಲಿ 5 ವರ್ಷದ ಬಾಲಕ ಅಮ್ಮನ ಜೊತೆ ಬ್ಯಾಡ್ಮಿಂಟನ್ ಆಟವಾಡ್ತಿದ್ದ. ಹಿಂದಿನಿಂದ ಬಂದ ರಂಜನ್, ಏಕಾಏಕಿ ಬಾಲಕನ ಬೆನ್ನಿಗೆ ಜೋರಾಗಿ ಒದ್ದಿದ್ದಾನೆ. ಬಳಿಕ ಏನೂ ಗೊತ್ತಿಲ್ಲದಂತೆ ತೆರಳಿದ್ದಾನೆ. ಈ ಕೃತ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೋಷಕರ ದೂರಿನ ಆಧಾರದ ಮೇಲೆ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು, ವಿಚಾರಣೆ ಮುಂದುವರಿಸಿದ್ದಾರೆ.