ಹುಬ್ಬಳ್ಳಿ: ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಗಲ್ಲಾ ಪೆಟ್ಟಿಗೆಯಲ್ಲಿದ್ದ ೩ ಲಕ್ಷ ಹಣವನ್ನು ದೋಚಿಕೊಂಡು ಹೋದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೋತಿದಾಸ ಪೋಕದಾಸ ವೈಷ್ಣವ(ಸಂತ) ಎಂಬಾತ ಕಳ್ಳತನ ಮಾಡಿರುವುದಾಗಿ ದೂರು ದಾಖಲಾಗಿದೆ. ಶೇಷಮಲ್ ಜೈನ್ ಎಂಬುವರ ಕೊಪ್ಪಿಕರ್ ರಸ್ತೆಯ ರೆಡಿಮೇಡ್ ಠೋಕ್ ಬಟ್ಟೆ ವ್ಯವಹಾರವನ್ನು ಮಾಡಿಕೊಂಡಿದ್ದಾರೆ. ೨೦೧೬ ರಿಂದ ಕೆಲಸ ಮಾಡುತ್ತಿದ್ದ ಮೋತಿದಾಸ ವಿಶ್ವಾಸಿಕನಂತೆ ನಟಿಸಿ ಮೋಸ ಮಾಡಿದ್ದಾನೆ. ೨೦೧೭ ರಲ್ಲಿ ದೂರುದಾರನ ಮಗ ಯತೀಶ ಬ್ಯಾಂಕಿನಿAದ ೩ ಲಕ್ಷ ತಂದು ಅಂಗಡಿಯ ಡ್ರಾದಲ್ಲಿ ಇಟ್ಟು ಮೋತಿದಾಸಗೆ ತಂದೆಯವರು ಬರುವವರೆಗೂ ನೋಡಿಕೊಳ್ಳುವಂತೆ ಹೇಳಿ ಹೋಗಿದ್ದಾನೆ. ಈ ವೇಳೆ ಮೋತಿದಾಸ್