ನಾಗಮಂಗಲ: ಮಗನನ್ನು ಗೆಲ್ಲಿಸಲು ಸಚಿವ ಚಲುವರಾಯಸ್ವಾಮಿ ಕುತಂತ್ರ ರಾಜಕಾರಣ: ಕದಬಹಳ್ಳಿಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ
ಡಿಸಿಸಿ ಬ್ಯಾಂಕ್ ನಿರ್ದೇಶಕನ ಸ್ಥಾನಕ್ಕೆ ಮಗನನ್ನು ಗೆಲ್ಲಿಸಲು ಸಚಿವ ಚಲುವರಾಯಸ್ವಾಮಿ ಕುತಂತ್ರ ರಾಜಕಾರಣ ಮಾಡಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದರು. ಬುಧವಾರ ಕದಬಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಂಚ ಒಡೆಯುವುದು, ಅಧಿಕಾರ ದುರುಪಯೋಗ ಮಾಡಿಕೊಳ್ಳುವುದು ಮತ್ತು ಅನ್ಯ ಮಾರ್ಗದಲ್ಲಿ ಗೆದ್ದು ಬೀಗುವುದು ಎಲ್ಲವೂ ಕೂಡ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ವಾಗ್ದಾಳಿ ನಡೆಸಿದರು. ತಮ್ಮ ಮಗನನ್ನು ಮಂಡ್ಯ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಗೆಲ್ಲಿಸಿಕೊಳ್ಳುವ ಉದ್ದೇಶದಿಂದ ಕುತಂತ್ರ ರಾಜಕಾರಣದ ಮೂಲಕ ಗೆಲುವು ಸಾಧಿಸಿದ್ದಾರೆ ಎಂದು ಟೀಕಿಸಿದರು. ಅನ್ಯ ಮಾರ್ಗದಲ್ಲಿ ಗೆದ್ದು ಬೀಗುವುದು ಅಧಿಕಾರ ದುರುಪಯೋಗ ಮಾಡಿಕೊಳ್ಳುವುದು ರೂಢಿಯಾಗಿದೆ ಎಂದರು.