ಹರಿಹರ: ದಿಂಗಾಲೇಶ್ವರ ಶ್ರೀಗಳು ರಾಜಕೀಯ ಶುದ್ಧೀಕರಣಕ್ಕಾಗಿ ರಾಜಕಾರಣಕ್ಕೆ ಬಂದಿದ್ದಾರೆ ;ನಗರದ ಪಂಚಮಸಾಲಿ ಮಠದಲ್ಲಿ ವಚನಾನಂದ ಶ್ರೀಗಳು
ದಿಂಗಾಲೇಶ್ವರ ಸ್ವಾಮೀಜಿ ಅವರು ರಾಜಕೀಯ ಶುದ್ದೀಕರಣಕ್ಕಾಗಿ ರಾಜಕಾರಣಕ್ಕೆ ಬಂದಿದ್ದಾರೆ.ಉತ್ತರ ಭಾರತದಂತೆ ಕರ್ನಾಟಕದಲ್ಲಿ ಮಠಾಧೀಶರು ರಾಜಕಾರಣಕ್ಕೆ ಬರಬೇಕು ರಾಜಕಾರಣ ದಲ್ಲಿ ಅಶುದ್ದಿಯನ್ನ ಶುದ್ದಿ ಮಾಡಲಿಕ್ಕೆ ಪರಮ ಪೂಜ್ಯರು ಬಹಳ ಯೋಗ್ಯರು ಅಂತ ನನಗೆ ಅನಿಸುತ್ತೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ಪಂಚಮಸಾಲಿ ಪೀಠದಲ್ಲಿ ವಚನಾನಂದ, ಸ್ವಾಮೀಜಿ ಹೇಳಿದರು. ಭಕ್ತರ ಎಲ್ಲರ ಅಭಿಪ್ರಾಯ ಕೇಳಿಕೊಂಡು ಚುನಾವಣೆ ಸ್ಪರ್ಧೆ ಮಾಡಿದ್ದಾರೆ .ಅದು ಅವರ ವೈಯಕ್ತಿಕ ನಿರ್ಧಾರವಲ್ಲ. ಪಂಚಮಸಾಲಿ ಸಮುದಾಯ ದಿಂಗಾಲೇಶ್ವರ, ಶ್ರೀಗೆ ಬೆಂಬಲ ನೀಡುವ ವಿಚಾರವಾಗಿ ಸದ್ಯದ್ರಲ್ಲೆ ಅಲ್ಲೊಂದು ಸಭೆ ಮಾಡಿ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು.