ಶಿವಮೊಗ್ಗ: ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಿವೆ, ಶಿವಮೊಗ್ಗದಲ್ಲಿ ಸರ್ಕಾರ ಇದ್ದಿಯೋ ಇಲ್ವೊ ಗೊತ್ತಿಲ್ಲ ಎಂದ ಬಿ.ವೈ.ರಾಘವೇಂದ್ರ
ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತಿದ್ದು, ಸರಕಾರ ಇದೆ ಎಂಬ ಅನುಭವವೇ ಇಲ್ಲವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಮಾತನಾಡಿದ ಅವರು, ರೌಡಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಕಿಡಿಗೇಡಿಗಳಿಗೆ ಪೊಲೀಸರ ಭಯವೇ ಇಲ್ಲ. ಭದ್ರಾವತಿಯಲ್ಲಿ ಸರಕಾರವೇ ಇಲ್ಲವಾಗಿದೆ ಅಲ್ಲಿ ಒಂದು ಕುಟುಂಬದ ಆಡಳಿತ ನಡೆಯುತ್ತಿದೆ. ಅಲ್ಲಿನ ಎಲ್ಲ ನೀಚ ಕೆಲಸಗಳೂ ಆ ಕುಟುಂಬದ ಅಂಕೆಯಲ್ಲಿ ನಡೆಯುತ್ತಿವೆ ಎಂಬ ಅನುಮಾನ ಜನರಿಗೆ ಬಂದಿದೆ. ಎಲ್ಲಿ ಇಸ್ಪೀಟ್ ಆಡಬೇಕು, ಎಲ್ಲಿ ಕ್ಲಬ್ ಇರಬೇಕು ಎಂದು ನಿರ್ಧಾರ ಆಗುತ್ತದೆ ಈ ಎಲ್ಲ ಕಾರಣಗಳಿಂದಾಗಿ ಬಾರ್ಗಳ ಮುಂದೆ ಕೊಲೆಗಳಾಗುತ್ತಿವೆ ಎಂದರು.