ಹುಬ್ಬಳ್ಳಿ: ಹರಿಪ್ರಿಯಾ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ₹2.90 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಸ್ತುಗಳಿದ್ದ ಬ್ಯಾಗ್ ಕಳ್ಳತನವಾದ ಘಟನೆ ನಡೆದಿದೆ.‘ಗೋವಾ ಮೂಲದ ಮಾಜಿ ಯೋಧ ಶ್ರೀನಿವಾಸಲು ವೆಂಕಟರಾಮಯ್ಯ ಎಂಬುವರು ಮಗಳೊಂದಿಗೆ ಕಪಡಾದಿಂದ ಲೋಂಡಾ ನಿಲ್ದಾಣಕ್ಕೆ ಸ್ಲೀಪರ್ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ ವೇಳೆ ಮಲಗಿದ್ದಾಗ ಅಪರಿಚಿತರು ಬ್ಯಾಗ್ನಲ್ಲಿದ್ದ ಚಿನ್ನಾಭರಣ ಹಾಗೂ ವಸ್ತುಗಳನ್ನು ಕದ್ದು ಶೌಚಾಲಯದಲ್ಲಿ ಬ್ಯಾಗ್ ಎಸೆದು ಪರಾರಿ ಆಗಿದ್ದಾರೆ. ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ತಲುಪಿದಾಗ ಶ್ರೀನಿವಾಸಲು ಎದ್ದು ನೋಡಿದಾಗ ಬ್ಯಾಗ್ ಕಳುವಾದ ಬಗ್ಗೆ ತಿಳಿದಿದೆ. ₹1.50 ಲಕ್ಷ ಮೌಲ್ಯದ 15 ಗ್ರಾಂ ಚಿನ್ನದ ಸರ, ₹1.37 ಲಕ್ಷ ಬೆಲೆ ಬಾಳುವ ಎರಡು ಮೊಬೈಲ್ ಫೋನ್, ₹3,500