ಕನ್ನಡಕ ತರುತ್ತೇನೆಂದು ತೆರಳಿದ ಯುವಕ ಕಾಣೆಯಾದ ಘಟನೆ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದ್ದು ಮಗನನ್ನು ಹುಡುಕಿಕೊಡಿ ಎಂದು ತಂದೆ ಯಳಂದೂರು ಠಾಣೆಗೆ ದೂರು ಕೊಟ್ಟಿದ್ದಾರೆ. ಕೆಸ್ತೂರು ಗ್ರಾಮದ ಶಾಂತಮೂರ್ತಿ ಎಂಬವರ ಮಗ ಹೇಮಂತ್ (25 ವರ್ಷ) ಕಾಣೆಯಾದವರು. ಮೈಸೂರಿಗೆ ಕನ್ನಡಕ ತರಲು ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಮಗ ವಾಪಸ್ ಮನೆಗೆ ಬಂದಿಲ್ಲ, ನನ್ನ ಮಗನನ್ನು ಪತ್ತೆ ಮಾಡಿಕೊಡಬೇಕೆಂದು ಶಾಂತಮೂರ್ತಿ ದೂರು ನೀಡಿದ್ದಾರೆ. ಈ ಸಂಬಂಧ ಯಳಂದೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು ಯುವಕನ ಗುರುತು ಸಿಕ್ಕಿದರೇ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.