ಹುಬ್ಬಳ್ಳಿ: ಯುವತಿಗೆ ಪ್ರೀತಿಸುವಂತೆ ಕಿರುಕಳ ಕೊಟ್ಟಿದಲ್ಲದೆ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಆಕಾಶ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಯುವತಿ ಮನೆ ಹತ್ತಿರುವ ಯುವಕ ಪ್ರೀತಿ ಮಾಡುವಂತೆ, ಮದುವೆಯಾಗುವಂತೆ ಪೀಡಿಸುವುದಲ್ಲದೆ, ಕಾಲೇಜಿಗೆ ಹೋಗುವಾಗ ಹಿಂಬಾಲಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. --