ಮಳವಳ್ಳಿ : ತಾಲ್ಲೂಕು ಕಚೇರಿ ಹಾಗೂ ತಾ ಪಂ ಕಚೇರಿಗಳಲ್ಲಿ ಸರಿಯಾಗಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲವೆಂಬ ವ್ಯಾಪಕ ದೂರುಗಳು ಕೇಳು ಬರುತ್ತಿರುವು ದರ ಜೊತೆಗೆ ಮಧ್ಯವರ್ತಿಗಳ ಹಾವಳಿಯಿಂದ ಸಾರ್ವಜನಿಕರ ಶೋಷಣೆ ಸಹ ನಡೆಯುತ್ತಿದೆ ಎಂಬ ದೂರು ಕೇಳಿಬರುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ವಹಿಸದ ತಹಶಿಲ್ದಾರ್ ಹಾಗೂ ತಾ ಪಂ ಇಒ ವಿರುದ್ಧ ತೀವ್ರ ಅಸಮ ಧಾನ ವ್ಯಕ್ತಪಡಿಸಿದ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು ಆಡಳಿತ ಸುಧಾರಣೆಗೆ ತಕ್ಷಣ ಕ್ರಮ ವಹಿಸು ವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಾಯಂಕಾಲ 6.30ರ ಸಮಯ ದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಷ್ಟೇ ಸೂಚನೆ ನೀಡಿದರೂ ಆಡಳಿತ ಸುಧಾರಣೆ ಕಾಣುತ್ತಿಲ್ಲ ಎಂದರು.