ಹುಬ್ಬಳ್ಳಿ: ಪ್ರೇಮ ವೈ-ಲ್ಯವಾಗಿದೆ ಎಂದು ಮಾನಸಿಕವಾಗಿ ನೊಂದ ೧೭ ವರ್ಷದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅರುಣಗೌಡ ಕೆಂಚನಗೌಡರ(೧೭) ಮೃತ ಪಟ್ಟ ಯುವಕ. ಪ್ರೇಮ ವೈ-ಲ್ಯವಾಗಿದೆ ಎಂದು ಮಾನಸಿಕವಾಗಿ ನೊಂದು ಕಳೆನಾಶಕ ವಿಷ ಸೇವಿಸಿ ಅಸ್ವಸ್ಥನಾಗಿದ್ದ. ಆತನನ್ನು ನಗರದ ಕೆಎಂಸಿಆರ್ಐ ಆಸ್ಪತ್ರೆಗೆ ಚಿಕಿತ್ಸಗೆ ರವಾನಿಸಲಾಗಿತ್ತು. ಚಿಕಿತ್ಸೆ -ಲಿಸದೆ ಗುರುವಾರ ತಡರಾತ್ರಿ ಮೃತಪಟ್ಟಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.