ಹುಬ್ಬಳ್ಳಿ: ಸೌದಿ ಅರೇಬಿಯಾದಲ್ಲಿ ಬಸ್ ದುರಂತದಲ್ಲಿ ಮೃತಪಟ್ಟ ಅಬ್ದುಲ್ ಗಣಿ ಶಿರಹಟ್ಟಿ ಅವರ ಹುಬ್ಬಳ್ಳಿಯ ಗಣೇಶಪೇಟಿಯ ನಿವಾಸಕ್ಕೆ ವಸತಿ ಹಾಗೂ ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜಡ್. ಜಮೀರ್ ಅಹ್ಮದಖಾನ್ ಅವರೊಂದಿಗೆ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲಾಯಿತು. ಇದೇ ವೇಳೆ ಸಚಿವರು ವೈಯಕ್ತಿಕವಾಗಿ 10 ಲಕ್ಷ ರೂ.ಗಳ ಚೆಕ್ ನೀಡಿ ಧನ ಸಹಾಯ ಮಾಡಿದರು. ಅಲ್ಲದೇ ಅಬ್ದುಲ್ ಗಣಿ ಅವರ ಪುತ್ರನಿಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗದ ಆದೇಶಪ್ರತಿ ನೀಡಿದರು ಮತ್ತು ಹಜ್ ಕಮಿಟಿಯಿಂದ 5 ಲಕ್ಷ ರೂ.ಗಳ ಸಹಾಯಧನ ನೀಡುವ ಭರವಸೆ ನೀಡಿದರು.