ಬೆಂಗಳೂರು ದಕ್ಷಿಣ: ಮಹಿಳೆಯರ ಮೇಲೆ ಮಚ್ಚು ಬೀಸಿ ಸರಗಳ್ಳತನ, ಗಿರಿನಗರದಲ್ಲಿ ಘಟನೆ
ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು ಮಹಿಳೆಯರ ಮೇಲೆ ಮಚ್ಚು ಬೀಸಿ ಸರಗಳ್ಳತನ ಮಾಡಿರುವ ಘಟನೆ ಗಿರಿನಗರ ವ್ಯಾಪ್ತಿಯ ಈಶ್ವರಿ ನಗರದಲ್ಲಿ ನಡೆದಿದೆ. ಸೆಪ್ಟೆಂಬರ್ 14ರಂದು ಸಂಜೆ 7ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಸರಗಳ್ಳರ ಅಟ್ಟಹಾಸಕ್ಕೆ ವರಲಕ್ಷ್ಮಿ ಎಂಬಾಕೆಯ ಕೈನ ಎರಡು ಬೆರಳು ಕಟ್ ಆಗಿವೆ.ಉಷಾ ಹಾಗೂ ವರಲಕ್ಷ್ಮೀ ಗಣೇಶ ಹಬ್ಬದ ಆರ್ಕೆಸ್ಟ್ರಾ ನೋಡಿಕೊಂಡು ಮನೆಗೆ ತೆರಳುತ್ತಿದ್ದರು.ಈ ಹಿಂದಿನಿಂದ ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಕುತ್ತಿಗೆಗೆ ಮಚ್ಚನ್ನ ಇಟ್ಟು ಚಿನ್ನದ ಸರ ಕಿತ್ತುಕೊಂಡಿದ್ದಾರೆ. ಆದರೆ ಪ್ರತಿರೋಧವೊಡ್ಡಿದ ವರಲಕ್ಷ್ಮೀ ಮೇಲೆ ಮಚ್ಚು ಬೀಸಿ ಚಿನ್ನದ ಸರ ಕಸಿದುಕೊಂಡು ಎಸ್ಕೇಪ್ ಆಗಿದ್ದಾರೆ.ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.