ಸಿರವಾರ: ಕಲ್ಲೂರಿಗೆ ತಾಲ್ಲೂಕು ಪಂಚಾಯಿತಿ ಇಒ ಭೇಟಿ, ಕುಡಿಯುವ ನೀರಿನ ಕೆರೆ ಪರಿಶೀಲನೆ
Sirwar, Raichur | Mar 23, 2024 ಕಲ್ಲೂರು ಗ್ರಾಮದ ಕುಡಿಯುವ ನೀರಿನ ಕೆರೆಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಬೇಸಿಗೆ ಹಿನ್ನೆಲೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಈಗಾಗಲೇ ಕೆರೆಗೆ ನೀರು ಹರಿಸಿದ ಕಾರಣ ನೀರಿನ ಪ್ರಮಾಣವನ್ನು ಚೆಕ್ ಮಾಡಿ, ಕೆರೆಗೆ ಇನ್ನೂ ಭರ್ತಿ ಮಾಡುವ ಕುರಿತು ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಿದರು.