ಯಲ್ಲಾಪುರ: ತಾಲೂಕು ಆಡಳಿತಸೌಧದಲ್ಲಿ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಆಚರಣೆ
.ಯಲ್ಲಾಪುರ: ತಾಲೂಕು ಆಡಳಿತ ಸೌಧ ಸಭಾಭವನದಲ್ಲಿ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ತಹಶೀಲ್ದಾರ ಚಂದ್ರ ಶೇಖರ್ ಹೊಸಮನಿ ಮಾತನಾಡಿ ಕನಕದಾಸರ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆಯಬೇಕು, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು. ಕನಕದಾಸ ಕುರಿತು ನಿವೃತ್ತ ಶಿಕ್ಷಕ ದಿಲೀಪಕುಮಾರ ದೊಡ್ಮನಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು, ಶ್ರೀ ಭಕ್ತ ಕನಕದಾಸ ಸೇವಾ ಸಮಿತಿ ಅಧ್ಯಕ್ಷರು, ಸಮುದಾಯದ ಮುಖಂಡರು ಇದ್ದರು.