ಸಂಘರ್ಷದ ನಡುವೆಯೂ ಶಿರಾಳಕೊಪ್ಪದಲ್ಲಿ ಆರ್ಎಸ್ ಪಥ ಸಂಚಲನ ಯಶಸ್ವಿಯಾಗಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಶನಿವಾರ ಆರ್ ಎಸ್ ಎಸ್ ಪಥ ಸಂಚಲನ ಅದ್ದೂರಿಯಾಗಿ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರದ ಶಾಸಕರಾದ ಬಿ ವೈ ವಿಜಯೇಂದ್ರ ಅವರು ಭಾಗವಹಿಸಿದ್ದರು. 5000ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದರು. ಶಿರಾಳಕೊಪ್ಪ ಪಟ್ಟಣದ ವಾಲ್ಮೀಕಿ ಭವನದಿಂದ ಆರಂಭವಾದ ಪತಸಂಚಲನ ಇಂದಿರಾ ಗಾಂಧಿ ಮೈದಾನದವರೆಗೆ ಸಾಗಿತು.