ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಭಾನುವಾರ ಸಂಜೆ 6ಗಂಟೆಗೆ ಸಂಭವಿಸಿದೆ. ಕೋಮಾರಿ(35) ಆತ್ಮಹತ್ಯೆ ಮಾಡಿಕೊಂಡ ರೈತ, ಕೃಷಿಗಾಗಿ ರೈತ ಬ್ಯಾಂಕ್ ಹಾಗೂ ಇತರೆ ಕಡೆ ಸಾಲಮಾಡಿಕೊಂಡಿದ್ದರು, ಜಮೀನಿನಲ್ಲಿ ಬೆಳೆದಿದ್ದ ಬೆಳೆ ಕೂಡ ಕೈಗೆ ಬಾರದೆ ನಷ್ಟ ಉಂಟಾಗಿದೆ. ಇದರಿಂದ ಮನನೊಂದುಕೊಂಡಿದ್ದ ಕೋಮಾರಿ, ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತನಿಗೆ ಪತ್ನಿ ಮತ್ತು ಇಬ್ಬರು ಪುತ್ರರಿದ್ದಾರೆ. ಈ ಕುರಿತು ಕುರುಗೋಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.