ಮುಂಡಗೋಡ: ಮಹಿಳೆ ನಾಪತ್ತೆ,ಪತ್ತೆಗೆ ಮನವಿ
ಮುಂಡಗೋಡ - ಐಶ್ವರ್ಯ ಸನ್ನಿಕುಮಾರ ನಾಯ್ಕ (27 ವರ್ಷ) ಸಾ.ಮರಾಠಿಕೊಪ್ಪ, ಶಿರಸಿ ಇವಳು ತನ್ನ ಅಣ್ಣ, ತಂದೆ ತಾಯಿಗೆ ತನ್ನ ಗಂಡನ ಮನೆ ಶಿರಸಿ ಗೆ ಹೋಗುತ್ತೇನೆ ಅಂತ ಹೇಳಿ ಹೋದವಳು ಇದುವರೆಗೂ ಮನೆಗೂ ಬಾರದೆ ಗಂಡನ ಮನೆಗೂ ಹೋಗದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ.ಕಾಣೆಯಾದ ಮಹಿಳೆ ಚಹರೆ: 4.8 ಅಡಿ ಎತ್ತರ, ದುಂಡನೆಯ ಮುಖ, ಸದೃಢ ಮೈ ಕಟ್ಟು, ಗೋಧಿ ಮೈ ಬಣ್ಣ, ಕನ್ನಡ, ಹಿಂದಿ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವ ಸಮಯದಲ್ಲಿ ಹಸಿರು ಬಣ್ಣದ ಚೂಡಿದಾರ, ಹಸಿರು ಬಣ್ಣದ ಪ್ಯಾಂಟ್ ಹಾಗೂ ಕೆಂಪು ಬಣ್ಣದ ವೇಲ್ ಧರಿಸಿರುತ್ತಾಳೆ.