ಹೊಸನಗರ ಪಟ್ಟಣದ 21 ವರ್ಷದ ನಾಗಭೂಷಣ್ ಬೆಂಗಳೂರಿನಲ್ಲಿ ಬುಧವಾರ ನಡೆದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ನಾಗಭೂಷಣ್ ಬೆಂಗಳೂರಿನ ಇಂಜಿನಿಯರ್ 4ನೇ ವರ್ಷದ ವಿದ್ಯಾರ್ಥಿಯಾಗಿದ್ದ. ಹೊಸನಗರದ ಶಿವಮೊಗ್ಗ ರಸ್ತೆಯ ಇವರ ಮನೆಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಮಾರಿಗುಡ್ಡದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು.