ಸಿದ್ಧಾಪುರ: ಭಾರಿ ಮಳೆಗೆ ಭುವನಗಿರಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಭೂ ಕುಸಿತ
ಸಿದ್ದಾಪುರ : ಭಾರೀ ಮಳೆಗೆ ಸಿದ್ದಾಪುರದ ದುಬಾರಿ ಘಟ್ಟದ ಬಳಿ ಹೆದ್ದಾರಿ ಕುಸಿಯುತ್ತಿದ್ದು, ಅಪಾಯ ಎದುರಾಗಿದೆ. ಸಿದ್ದಾಪುರದ ಭುವನಗಿರಿ ಸಮೀಪ ಕುಮಟಾ-ಕೋಡಮಡಗಿ ರಾಜ್ಯ ಹೆದ್ದಾರಿಯಲ್ಲಿ ಭೂ ಕುಸಿತವಾಗುತ್ತಿದೆ. ರಾಜ್ಯ ಹೆದ್ದಾರಿ 48 ರ ಭುವನಗಿರಿ ಘಟ್ಟದಲ್ಲಿ ಘಟನೆ ಜರುಗಿದೆ.ಹಿಂದಿನ ವರ್ಷವೇ ಈ ಬಗ್ಗೆ ಲೋಕೋಪಯೋಗಿ ಇಲಾಖೆ ಗಮನಕ್ಕೆ ತರಲಾಗಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಪರಿಣಾಮ ಕುಸಿತದಿಂದಾಗಿ ಸಂಪರ್ಕ ಇರದ ಸಾಧ್ಯತೆಗಳು ಎದುರಾಗಲಿದೆ.