ಬೆಂಗಳೂರು ದಕ್ಷಿಣ: ನಕಲಿ ಬಿಪಿಒ ತೆರೆದು ಪೊಲೀಸರ ಸೋಗಿನಲ್ಲಿ ಕರೆ ಮಾಡಿ ವಂಚನೆ; 16 ವಂಚಕರನ್ನು ಬಂಧಿಸಿದ HSR ಠಾಣೆ ಪೊಲೀಸರು
ಪೊಲೀಸ್ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ ಲಕ್ಷಾಂತರ ರೂ ಹಣ ಪಡೆದು ವಂಚಿಸುತ್ತಿದ್ದ ಗ್ಯಾಂಗ್ ನ 16 ಮಂದಿ ಆರೋಪಿಗಳನ್ನು ಮಂಗಳವಾರ ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ೮ ಮಂದಿ ಮಹಾರಾಷ್ಟ್ರ, ಮೇಘಾಲಯದ ೪, ಒರಿಸ್ಸಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ಮೂಲದ ನಾಲ್ವರು ಸೇರಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಂಧಿತರಿಂದ 41 ಕಂಪ್ಯೂಟರ್, 41 ಮೊನಿಟರ್, 40 ಸಿ.ಪಿ.ಯು, 41 ಮೌಸ್, 41 ಕಿ ಬೋರ್ಡ್, 41 ವಿಜಿಎ ಕೇಬಲ್, 82 ಪವರ್ ಕೇಬಲ್, 25 ಮೊಬೈಲ್ ಗಳು ಐ.ಡಿ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.