ಪ್ರಧಾನಿ ಮೋದಿ 2025ರ ಕೊನೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದುಬೈ ಕನ್ನಡ ಶಾಲೆಯ ಕಾರ್ಯ ವೈಖರಿ ಶ್ಲ್ಯಾಘಿಸಿದ್ದಾರೆ. ಈ ಹಿನ್ನೆಲೆ ಚಿತ್ರದುರ್ಗದಲ್ಲಿ ದುಬೈ ಕನ್ನಡ ಶಾಲೆಯ ಅಧ್ಯಕ್ಷ ಶಶಿಧರ್ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು ನಾನು 24 ವರ್ಷಗಳಿಂದ ದುಬೈ ನಲ್ಲಿ ಅನಿವಾಸಿ ಭಾರತೀಯನಾಗಿ ವಾಸ ಮಾಡುತ್ತಿದ್ದೇನೆ. 12 ವರ್ಷಗಳಿಂದ ದುಬೈನಲ್ಲಿ ಮಾತೃಭಾಷಾ ಪ್ರೇಮ ಮೆರೆಯುವ ಕೆಲಸ ಮಾಡಿದ್ದೇವೆ. ಕನ್ನಡ ಮಿತ್ರರಿಂದ ಕೂಡಿ ಮಾತೃಭಾಷೆ ಕಲಿಸುವ ಕಾರ್ಯಕ್ಕೆ ಕೈ ಹಾಕಿದ್ದು, 12 ವರ್ಷಗಳಲ್ಲಿ 45 ಮಕ್ಕಳಿಂದ ಪ್ರಾರಂಭವಾದ ಶಾಲೆ ಸಧ್ಯ 1436 ಮಕ್ಕಳನ್ನು ಹೊಂದಿದೆ ಎಂದರು. ಮಕ್ಕಳಿಗೆ ಯಾವುದೇ ಶಾಲಾ ಶುಲ್ಕ ಇರೋದಿಲ್ಲ ಎಂದರು